ಬದುಕೆಂಬ ಫುಟ್ಬಾಲ್ ಆಟದಲ್ಲಿ ನೀವೇ ಗೋಲ್ ಕೀಪರ್. ಆಟದ ವೈಶಿಷ್ಟ್ಯ ಏನೆಂದರೆ ನಮ್ಮವರು ಒದೆಯುತ್ತಾರೆ ವಿರೋಧಿಗಳು ಒದೆಯುತ್ತಾರೆ ತಡೆಯುವ ( ತಡೆದುಕೊಳ್ಳುವ ) ತಾಕತ್ತು ಕೇವಲ ಗೋಲ್ ಕೀಪರ್ ಗೆ ಮಾತ್ರ. ಓಡೋಡಿ ಬರ್ತಾರೆ ಯದ್ವಾ ತದ್ವಾ ಕಿಕ್ ಮಾಡ್ತಾರೆ ಸಾಲದು ಎಂಬುದಕ್ಕೆ ತಲೆಯಿಂದ ಡಿಚ್ಚಿ ಹೊಡೀತಾರೆ ಕೆಲವರು ಭಯಾನಕವಾಗಿ ಕಿರುಚುತ್ತಾರೆ ಇನ್ನು ಹಲವರು ಅಂಪೈಯರ್ ಜೊತೆಗೆ ಜಗಳಕ್ಕೆ ಇಳಿತಾರೆ. ಓಡುವಾಗ ಅಡ್ಡಗಾಲು ಹಾಕ್ತಾರೆ ಬೀಳಿಸುತ್ತಾರೆ ಮುಂದೆ ಹೋಗದಂತೆ ತಡೆಯುತ್ತಾರೆ.
ಒಟ್ಟಾರೆ ಒದೆ ಗ್ಯಾರಂಟಿ.
ಪಾಜಿಟಿವ್ ಥಿಂಕಿಂಗ್
ಆಟದ ನಿಯಮಗಳಲ್ಲಿ ಚೆಂಡನ್ನು ಕೈಯಿಂದ ಮುಟ್ಟುವಂತಿಲ್ಲ ಆದರೆ ಎದೆಯೊಡ್ಡಬಹದು.
ಜೀವನ ಎಂಬ ಫುಟ್ಬಾಲ್ ಆಟದಲ್ಲಿ ನಿಂದನೆ, ಅಪಪ್ರಚಾರ, ಅಸೂಯೆ ಎಂಬ ಅಡತಡೆಗಳು ಅವಕಾಶಗಳಾಗಿ ಬದಲಾಗಬೇಕಾದರೆ ಕಷ್ಟಗಳೆಂಬ ಬಾಲಗಳಿಗೆ ಎದೆಯೊಡ್ಡಿ ತಡೆದು
ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ಗೆಲವು ಎಂಬ ಗೋಲ್ ಹೊಡೆಯುವದೇ ಗೋಲ್ಡನ್ ಅವಕಾಶ.
ಬಿ ಪಾಜಿಟಿವ್
ಗೋಲ್ ಕಿಪರ್ ಬಗ್ಗೆ ವಿಶೇಷವಾದ ವಿಶಿಷ್ಠವಾದ ರೋಮಾಂಚನಕಾರಿ ವಿಷಯ ಇಲ್ಲಿದೆ ನೋಡಿ. ಕೇವಲ 45 ನಿಮಿಷಗಳ ಆಟವಾಡಲು ನಾಲೈದು ವರ್ಷ ತಾಲೀಮು ಮಾಡಿ
ತಯಾರಿ ನಡೆಸುತ್ತಾರೆ. ಗೋಲ್ ಕಿಪರ್ ಊಟವನ್ನು ಹೇಗೆ ಮಾಡಬೇಕು ಡಯಟ್ ಪ್ಲಾನ್ ಕುರಿತು ತರಬೇತುದಾರನಿರುತ್ತಾನೆ. ಇನ್ನು ಫಿಟ್‌ನೆಸ್ ಅದರಲ್ಲೂ ಥೈಸ್ ( ತೊಡೆ) ಫಿಟ್ ಆಗಿರಲು ಫಿಟ್‌ನೆಸ್ ಕೋಚ್ ನಿಡ್ತಾರೆ. ಮಾನಸಿಕ ಆರೋಗ್ಯ ವೃದ್ಧಿ ಯಾವ ದಿಕ್ಕಿನಿಂದ ಬಾಲ್ ಬರಬಹುದು ಅದನ್ನು ಅಸ್ಯೂಮ್ ಮಾಡುವದು ಹೇಗೆ? ಅಷ್ಟ ದಿಕ್ಕಿನಿಂದ ಅತ್ಯಂತ ವೇಗವಾಗಿ ಬರುತ್ತಿರುವ ಬಾಲ್ ನ್ನು ಆಲಂಗಿಸುವದು ಹೇಗೆ? ಕ್ಷಣಾರ್ಧದಲ್ಲಿ ಗೋಲ್ ಮುಂದೆ ಗೋಡೆಯಾಗುವದು ಹೇಗೆ? ಏಕೆಂದರೆ ಗೋಲ್ ಕೀಪರ್ ತನ್ನ ಸೇಫ್ಟಿ ಫೀಚರ್ ಹೆಲ್ಮೇಟ್ , ಸೆಂಟರ್ ಗಾರ್ಡ್, ಹ್ಯಾಂಡ್ ಗ್ಲೌಸ್‌ನಂತಹ ಅವಶ್ಯಕ ಸೆಲ್ಫ್ ಡಿಫೆನ್ಸ್ ಅಸ್ತ್ರಗಳನ್ನು ಹಾಕಿಕೊಂಡು ಓಡಾಡಿ ಬಾಲ್ ಹಿಡಿಯಬೇಕು. ಇದೆಲ್ಲಾ ತರಬೇತಿಯನ್ನು ಮೈಂಡ್ ಮೆಂಟರ್ ಮಾಡುತ್ತಾರೆ. ಮೈದಾನದಲ್ಲಿ ಕೇವಲ 45 ನಿಮಿಷಗಳ ಆಟದ ತಯಾರಿಗಾಗಿ ಮೂವರು ಕೋಚ್ ಗಳ ಅವಶ್ಯಕತೆಯಿದೆ ಎಂದಾದರೆ ನಮ್ಮ ಲೈಫ್ ಗೇಮ್ ಗೆ ಎಷ್ಟು ಕೋಚ್ ಬೇಕು ಎಂಬುದು ನೀವೇ ಲೆಕ್ಕ ಹಾಕಿಕೊಳ್ಳಿ. ನನ್ನ ಪ್ರಕಾರ ಕನಿಷ್ಠ ಎಂದರೆ ಇಬ್ಬರು ಮೆಂಟರ್ ಬೇಕೆ ಬೇಕು.
ಉದ್ಯೋಗ ಭಾಗ್ಯ ಸಲಹೆಗಾಗಿ
ಓರ್ವ ಮತ್ತು ಆಹಾರ ಆರೋಗ್ಯ ಕ್ಕಾಗಿ ಇನ್ನೊರ್ವ ತರಬೇತುದಾರ ಬೇಕು.
ತರಬೇತಿ ನಿರಂತರವಾಗಿರಲಿ.. ಯಶಸ್ವಿ ಜೀವನದ ದಾರಿಯಲ್ಲಿ ಗೆಲುವು ಸದಾ ನಿಮ್ಮದಾಗಿರಲಿ..!
ಶುಭವಾಗಲಿ.


Be the Best.